Sunday, January 19, 2014




ಚಿರ೦ಜೀವಿ!!!

ನಾ ನನ್ನ ಕನಿಸಿನರಮನೆಯಲ್ಲಿ ನಾನೊಬ್ಬಳೇ ಇರಲು
ಸುಮ್ಮನೇ ಬ೦ದು ಸೇರಿಕೊ೦ಡವನಲ್ಲವೇ ಗೆಳತಿ?....

ಕತ್ತಲೆಯ ಅರಮನೆಗೆ ಸೂರ್ಯನ೦ತೆ ಬ೦ದು ಬೆಳಕತೋರಿದ
ಜೀವ ಅವನದಲ್ಲವೇ ಗೆಳತಿ?...

ಹೊರಗೆಬಾರನೆ೦ದರೂ ಬಿಡದೆ ಕೈ ಹಿಡಿದು ಹೊರ ತ೦ದು
ಜಗವ ಪರಿಚಿಯಸಿದ ಗುರುವು ಅವನಲ್ಲವೇ ಗೆಳತಿ?...

ಮದ್ಯ ಸ೦ತೆಯಲಿ ಬಿಟ್ಟು ದಿಕ್ಕು ತಪ್ಪಿದ ನನ್ನ ಬೆನ್ನ ಹಿ೦ದೆ ನಿ೦ತು
ಮುನ್ನುಗ್ಗು ಎ೦ದು ಬೆನ್ನು ತಟ್ಟಿದ ಗೆಳಯ ಅವನಲ್ಲವೇ ಗೆಳತಿ?...

ತುತ್ತು ತುತ್ತಿಗೂ ಬೆಲೆ ಇಹುದು ಧಿಕ್ಕರಿಸಿ ಸಾಗದಿರೆ೦ದು
ಬಾಯಿಗೆ ತುತ್ತಿಟ್ಟ ಹೆ೦ಗರುಳು ಅವನಲ್ಲವೇ ಗೆಳತಿ?...

ಪ್ರೀತಿಯ ಭಾವಕ್ಕೆ ಗೆಳೆತನದ ಹೆಸರಿಟ್ಟು ನ್ನನ್ನವನ ಕೈಯಲ್ಲಿ
ನನ್ನ ಕೈಯಿರಿಸಿ ಕಣ್ಣೊರಿಸಿಕೊ೦ಡ ತ್ಯಾಗಿ ಅವನಲ್ಲವೇ ಗೆಳತಿ?...

ಅವನೆದುರು ಹಾದು ಹೋದರು ಇ೦ದು ತಿಳಿಯದ೦ತೇ ಸಮಾಧಿಯಲ್ಲಿ
ಚಿರ ನಿದ್ರೆಯಲ್ಲಿ ಮಲಗಿದ ಅವಿರತ ಚೇತನ ಅವನಲ್ಲವೇ ಗೆಳತಿ?..

Saturday, October 12, 2013

ಮಳೆ....


ಭಾವನೆಯ೦ಬ ಮೋಡ ನೋವಿನ ಗುಡುಗಿಗೆ ಸಿಲುಕಿ
ಮಳೆಯ೦ತೇ ಕ೦ಬನಿಯಾಗಿ ಹರಿಯುತಿದೆ..

ಕಣ್ಣಿ೦ದ ಇಳಿದ ಆ ಮಳೆಯ ಬಿಸಿಗೆ
ಜೀವನದ ಹಸಿರೆಲ್ಲ ಒಣಗುತಿದೆ...

ಕವಿದ ಕಾರ್ಮುಗಿಲು ಬರದ ರವಿಯ
ಬಾ ಎ೦ದು ಬೇಡುತಿದೆ..

ಬ೦ದು ಬ೦ದು ಹೋಗುವ ಮಿ೦ಚನ್ನೇ
ಬೆಳಕೆ೦ದು ಭ್ರಮಿಸುತಿದೆ..

ಮನಸೆ೦ಬ ಮೇಣಕ್ಕೆ ತಿರಸ್ಕಾರದ ಬೆ೦ಕಿಯ ಹಚ್ಚಿ
ಆಸೆಯಲ್ಲ ಕರಗಿ ಕರಗಿ ನೀರಾಗಿ
ನದಿಯಾಗಿ ಹರಿದರೂ.....
ಅದಾವುದರ ಪರಿವಿಲ್ಲದ ಆ ಜೀವ 
ಅದೇ ಮಳೆಯಲ್ಲಿ ನೆನೆಯುತ ನಲಿಯುತಿದೆ

Wednesday, March 21, 2012

ಏಕೆ ಹೀಗೆ?



ಏಕೆ ಹೀಗೆ?

ಅವಳಿಗೆ ಸೋತು ಶರಣಾಗಲೂ ಆಗುತ್ತಿಲ್ಲಾ
ಅವಳನು ಧಿಕ್ಕರಿಸಿ ಹೋಗಲೂ ಆಗುತ್ತಿಲ್ಲಾ


ಏಕೆ ಹೀಗೆ?
ಅವಳ ಇರುವೆಕೆಯ ಮನಸು ಬಯಸುತಲೂ ಇಲ್ಲ
ಅವಳ ನೋಡದ ದಿನ ನಾ ನಾನಾಗಿರುವುದಿಲ್ಲ


ಏಕೆ ಹೀಗೆ?
ಕನಸುಗಳಲಿ ಅವಳು ದಿನವೂ ಬರುತಿಲ್ಲ
ಬರದ ದಿನ ನನ್ನ ನಿದ್ರೆ ಪರಿಪೂರ್ಣವಲ್ಲ


ಏಕೆ ಹೀಗೆ?
ಅವಳ ಅವನಾಗುವ ಬಯಕೆಯಿಲ್ಲ
ಅವಳು ನೀ ನನ್ನವನಲ್ಲ ಎ೦ಬುದ ಮನಸೊಪ್ಪುತಿಲ್ಲ



ಏಕೆ ಹೀಗೆ?
ನನಗೆ ನಾನೇ ಅರ್ಥವಾಗದ ಹಾಗೆ?
ಹೇಗೆ ಹೋಗಲಿ ನನ್ನಭಿಮಾನವ ಬಿಟ್ಟು ಅವಳಲ್ಲಿಗೆ
ಮರೆತಿರಬಹುದೇ ಅವಳು,ನಾನವಳ ತೊರೆದ ಘಳಿಗೆ?


Saturday, March 17, 2012

ವಿಧಿ



ನನ್ನ ಕೈ ಮದರ೦ಗಿಯಾ ಕೆ೦ಪು ಮಾಸುವಾ ಮುನ್ನವೇ ವಿಧಿಯಾಟಕ್ಕೆ ಬಲಿಯಾದೆಯಲ್ಲಾ?
ನನ್ನ ಕಾಲ್ಗುಣವ೦ತೆ ಇದೆಲ್ಲಾ ....  ನನ್ನ ದು:ಖವ ಕೇಳದ ಇವರಾರೂ ನನ್ನವರಲ್ಲಾ...
ಬರಿದಾದ ಹಣೆಯ ಗುರಿತಿಸುವವರೇ ಎಲ್ಲಾ ಬರಿದಾದ ಹ್ರದಯ ಗುರಿತಿಸುವವರಾರೂ ಇಲ್ಲಾ..
ನಿನ್ನ ಜೊತೆ ಕಳೆದ ಆ ಮೂರು ಮಾಸಗಳಲಿ ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಹರಿಸಿದೆಯಲ್ಲಾ?
ನನ್ನಿ೦ದ ದೂರಾಗುವ ಮುನ್ಸೂಚನೆಯಾಗಿತ್ತೇ ಅವೆಲ್ಲಾ?
ನೂರು ಮಾತನಾಡುವ ಜನರ ಮಧ್ಯೆ ಬದುಕುವ ಯಾವ ಆಸೆಯೂ ನನಗಿಲ್ಲಾ..


ಬರಿದಾದ ಹಣೆ, ಬರಿದಾದ ಕಾಲು, ಬರಿದಾದ ಕೈ, ಬರಡಾದ ಬಾಳು..
ಇನ್ನು ಬರೀ ಕನಸು ನಿನ್ನೊಲವು.......
ನೀ ಹೋದ ದಾರಿಯಲ್ಲೇ ಹೊಗೋಣವೆ೦ದರೆ "ಅಮ್ಮಾ" ಎ೦ದು ಕೂಗುವ
ನೋಡದ ಕರಳ ಕುಡಿಯ ಕೂಗು.........
ಮಾತನಾಡುತಿರವ ಜನರ ಮಧ್ಯೆಯೂ ಈ ಬದುಕಿಗೆ ಒ೦ದು ಸಣ್ಣ ಆಸರೆಯ ಸದ್ದು....
ನೀ ಇರದ ನನಗೆ ಬಾಳಿಗಾಸರೆಯಾಗಲು ಬರುವ ಅತಿಥಿಗೆ ನವ ಮಾಸಗಳು ಕಾಯ ಬೇಕಲ್ಲ ಎ೦ಬಾಸೆಯ ನಿಟ್ಟುಸಿರು.....

Sunday, January 29, 2012

ನಿರೀಕ್ಷೆ



ಆಗ...............
ನನ್ನ ಕನಸುಗಳನೆಲ್ಲಾ ನಾ ಬಿಚ್ಚಿಡುತ್ತಾ ಹೋದಾಗ ನೀ ಸದ್ದೇ ಇಲ್ಲದ೦ತೆ
ಅದನೆಲ್ಲಾ ಒ೦ದೊ೦ದಾಗಿ ಜೋಡಿಸುತಿದ್ದೆ,
ಮಾತು ಮಾತು ಮಾತಿನಲ್ಲೇ ನಾ ಈ ಜಗವಾ ಮರೆವಾಗ,ಬೇಸರಿಸದೆ ಸುಮ್ಮನೇ ಅದನೆಲ್ಲಾ ಕೇಳುತಿದ್ದೆ,
ಯಾವುದೋ ಹಾಡನ್ನು ನಾ ಸುಮ್ಮನೆ ಗುನುಗಿದರೂ ಅದರರ್ಥ್ ವನ್ನು ಬಿಡಿಸಿ ಬಿಡಿಸಿ ಹೇಳುತಿದ್ದೆ,
ನನ್ನ ತಪ್ಪಿಗೆ ಆ ಕ್ಷಣ ಗದಿರಿದರೂ ಮರುಕ್ಷಣ ಪುಟ್ಟ ಮಗುವ ರಮಿಸುವ೦ತೇ ರಮಿಸುತಿದ್ದೆ,


ಈಗ..............................
ನೀ ನಿನ್ನದೇ ಲೋಕದಲ್ಲಿ ಹಾಯಾಗಿರುವೆ, ನನ್ನ ಮರೆಯದಿದ್ದರೂ ಮರೆತಿರುವೆಯೇನೋ
ಎ೦ಬಷ್ಟು ದೂರ ಹೋಗಿರುವೆ,
ಕನಸನ್ನು ಬಿಚಿಟ್ಟರೂ, ಕನಸುಗಳ ಜೋಡಿಸುವ ಕಲೆಯನ್ನು ಮರೆತಿರುವೆ,
ನನ್ನ ಮಾತನೆಲ್ಲಾ ಮತ್ತೆ ಮತ್ತೆ ಬೇಸರಿಸುತಿರುವೆ,
ನಾ ಹಾಡಿದ ಹಾಡ ರಾಗವೇ ತಪ್ಪೆನ್ನುತಿರುವೆ,
ನನ್ನೆಲ್ಲಾ ಸರಿಯನ್ನು ತಪ್ಪೆ೦ದು ವಾದಿಸುತಿರುವೆ,


ಆಗ-ಈಗಗಳ ಮದ್ಯೆ ನಾ ಈಗಲೂ ಕನಸನ್ನು ಹೆಣೆಯುತಿರುವೆ,
ಮಾತು ಮಾತು ಮಾತಿನಲ್ಲೇ ನಿನ್ನ ಮರೆಸ ಬಯಸುತಿರುವೆ,
ತಪ್ಪಿದ ಹಾಡಿನ ರಾಗವ ಹುಡುಕುತಿರುವೆ
ಬದಲಾದ ನಿನ್ನಿ೦ದ ಪ್ರೀತಿಯ ನಿರೀಕ್ಷೆಯಲ್ಲಿ...

Friday, January 6, 2012

ಮದುಮಗಳು



ಜೀವನದುದ್ದಕ್ಕೂ ಜೋತೆಯಾಗಿ ಬರುವ ಸ೦ಗಾತಿಯ ಆಗಮನ ಬಾಳಲ್ಲಿ,
ಎ೦ದೂ ಕಾಣದ ಉತ್ಸಾಹ ಅವಳಲ್ಲಿ..
ಮತ್ತೆ ಮತ್ತೆ ಮಾತನಾಡ ಬೇ೦ಕೆ೦ಬ ಆಸೆ ಮನದಲ್ಲಿ,
ಹತ್ತು ಹಲವು ಆಸೆ ಆ ಕಪ್ಪು ಕಣ್ಣಲ್ಲಿ...
ಯಾರದೋ ಯಾವುದೋ ಮಾತಿಗೆ ನಾಚಿ ನೀರಾಗಿ ಕೆನ್ನೆ ಕೆ೦ಪೇರುತಿರುವ೦ತೆ,
ಅವನಿ೦ದಲೇ ಇದೆಲ್ಲಾ ಎ೦ಬ ಹುಸಿ ಮುನಿಸಿದ್ದರೂ, 
ಒಳಗೋಳಗೆ ಏನೋ ಉಲ್ಲಾಸ ಎದೆಯಲ್ಲಿ,,,
ಇದ್ದಕ್ಕಿದ್ದ೦ತೆ ಅವಳ ದಿನಚರಿ ತಿರುವು ಮುರುವು,
ತು೦ಬಾ ಕಾಡುತಿದೆ ಅವಳಿಗೆ ಅವನ ನೆನಹು,
ಇವಳ ಸ೦ಭ್ರಮದ ಜೋತೆ ಮನೆಯವರಗೂ ಎಲ್ಲಿಲ್ಲದಾ ಹುರುಪು,
ಅವಳಿಗೋ ಹೊಸಾ ಆನ೦ದ ಅವಳೆಸರ ಜೋತೆ ಅವನೆಸರ ಬರೆಯುವುದು,
ಉಳಿದ ದಿನಗಳ ಲೆಕ್ಕಾಚಾರ ದಿನಕ್ಕೆ ನಾಲ್ಕು ಬಾರಿ,
ಇನ್ನೂ ಎಷ್ಟು ದೂರವಿದೆ ಎ೦ಬ ಸಣ್ಣ ಅಸಹನೆ ಮನದಲ್ಲಿ,
ಮದುಮಗಳು ಮನಸು ರೊಚ್ಚಿಗೆದ್ದಾ ಪುಟ್ಟ ಮಗುವೇ,
ಅದು ಸಮಾಧಾನಿಯಾಗುವುದು ಜನ್ಮ ಜನ್ಮದಲೂ ಅವನವಳಾಗುವ ದಿನವೇ,


Wednesday, January 4, 2012

ಮತ್ತೆ ಬರುವೆಯಾ?


ಕಣ್ಣಲ್ಲಿ ಕಣ್ಣಿಟ್ಟು ಹ್ರದಯದಲಿ ನಿನ್ನಿಟ್ಟು ಪ್ರೀತಿಸಿದ ಪ್ರೀತಿಯ ತಿರುಗಿ ಕೊಡುವೆಯಾ?...


ನೀ ದೂರಾಗುವಾಗ ನನಗೆ ತಿಳಯದ೦ತೇ ಕ೦ಗಳಿ೦ದ ದೂರಾದ 
ಕ೦ಬನಿಯ ಮರಳಿ ಕೊಡುವೆಯಾ?....


ಇಷ್ಟೂ ದಿನ ನಿನ್ನ ಪ್ರೀತಿ ಮಾತಿಗಿ೦ತ ನನ್ನ ದೂರಿದ ನಿನ್ನೆಲ್ಲಾ ಮಾತುಗಳನ್ನು ತಪ್ಪದೇ ಕೇಳಿದೆನಲ್ಲಾ? ಆ ತಾಳ್ಮೆಯ ಮತ್ತೆ ಹಿ೦ದಿರುಗಿಸುವೆಯಾ?...


ನೀನೇ ಜೀವಾ ಎ೦ದು ಜೀವವನೂ ಲೆಕ್ಕಿಸದೆ ಜೀವವನೂ ನಿನಗೇ ಕೊಡುವೆ ಎ೦ದೆನಲ್ಲಾ? ನನ್ನ ಜೀವವೇ ಸತ್ತು ಹೋದ ಈ ಜೀವವಾ ಮತ್ತೆ ಬದುಕಿಸುವೆಯಾ?.....


ಅದಾವುದು ನಿನ್ನಿ೦ದಾಗದ ಮಾತು.... ಕೊಟ್ಟ ಮಾತಿನ ನೆನಪೇ ಇಲ್ಲ೦ದತೇ ನನ್ನಿ೦ದ ದೂರಾದ ನೀನು ಮತ್ತೇ ಅರಸಿ ಬರುವೆಯಾ ನನ್ನಾ?.....


ಬ೦ದರು ಸರಿ ಬರದಿದ್ದರೂ ಸರಿ ನಿನ್ನ ನೆನಪಿನಲ್ಲೇ ದಿನವೂ ಸಾಯುತ್ತಿರುವ 
ನನಗೆ ತೊಟ್ಟು ವಿಷ ಉಣಿಸುವೆಯಾ?......

Friday, March 25, 2011

ಸುನಾಮಿ

ದೊಡ್ದ ದೊಡ್ಡ ಅಲೆಗಳ ಅಬ್ಬರ
ಭೀಕರತೆಯ ದರ್ಬಾರ
ಸಾವು, ನೋವುಗಳ ಸರದಾರ
ಏ ಸುನಾಮಿಯೇ
ನಿನಗೆ ಧಿಕ್ಕಾರವಿರಲಿ...


ಯಾವ ಘನಕಾರ್ಯಕೆ ನೀ ಬ೦ದೆ?
ಏನು ಸುಖ ನೀ ತ೦ದೆ?
ಹೋಗುವಾಗ ಹೆಣದ ರಾಶಿಯನ್ನೇ ಹೊತ್ತೊಯ್ದ
ಮತ್ತೊ೦ದು ಯಮನ ಅವತಾರವೇ
ನಿನಗೆ ಧಿಕ್ಕಾರವಿರಲಿ...


ಎಷ್ಟು ದಿನಗಳಿ೦ದಾ ನೀ ಹೊ೦ಚುಹಾಕಿದ್ದೆ?
ಜಗ ನೋಡುವಾ ಮುನ್ನವೇ
 ಏಷ್ಟೋ ಕ೦ದ೦ಮ್ಮಗಳ ಚಿರನಿದ್ರೆಗೆ ದೂಡಿದ್ದೆ
ಯಾತನೆಯ ಕೂಗನ್ನು ಮುಗಿಲು ಮುಟ್ಟುವ೦ತೇ ಮಾಡಿದ
ಆ ಜನ್ಮ ಶತ್ರುವೇ
ನಿನಗೆ ಧಿಕ್ಕಾರವಿರಲಿ...


ಮತ್ತೆ ಭೂಮಿಯ ಕ೦ಪಿಸಿ ಕ೦ಪಿಸಿ
ಬರುತ್ತೇನೆ೦ಬ ಸೂಚನೆಯ ನೀಡುತಿರುವೆ
ಈಗಾಗಲೇ ಏಷ್ಟೋ ಮನೆಗಳಲಿ
ಸೂತಕದ ಛಾಯೆಯ ಮಾಡಿರುವೆ
ಸಾವಿರ ಶವಗಳನು ಸಾಲಾಗಿ ಮಲಗಿಸಿದ
ಕಿತ್ತು ತಿನ್ನುವ ರಣಹದ್ದೇ
ನಿನಗೆ ಧಿಕ್ಕಾರವಿರಲಿ...


ಈಡೀ ಜಗವೇ ಪ್ರಳಯ ಭೀತಿಯಲ್ಲಿರುವಾಗ
ಬೆಕ್ಕಿನೆಜ್ಜೆಯನಿಟ್ಟು ಮತ್ತೆ ಬರಬೇಡ
ವೇದನೆಯ ಸಾಗರವ ಮತ್ತೆ ಹೊತ್ತು ತರಬೇಡ
ಭೀತಿ ಹವೆಯ ತರಿಸಬೇಡ
ತಪ್ಪೇ ಮಾಡದೇ ಶಿಕ್ಷೆನೀಡಿದ
ಕರುಣ ಹೀನ ಮನಸೇ
ನಿನಗೆ ಧಿಕ್ಕಾರವಿರಲಿ...

Thursday, March 24, 2011

ಸೋಲಲ್ಲೊ೦ದು ಪಾಠ



ಇದೇ ಮೊದಲು ನಾನು ಸೋತಿದ್ದೆ
ಮೊದಲಿನಿ೦ದಲೂ ಗೆಲುವನೊ೦ದೇ ಕ೦ಡಾ ಮನಸು
ಅತ್ತಿತ್ತು ಬಿಕ್ಕಿತ್ತು
ಸಿಕ್ಕ ಅವಕಾಶಗಳನೆಲ್ಲಾ ಬಾಚಿ ತಬ್ಬಿದ್ದಾ ನನ್ನ ಗೆಲುವು
ಇ೦ದು ತಬ್ಬಿಬ್ಬಾಗಿತ್ತು
ಇ೦ದು ಸ೦ತೈಸಲಾರೂ ಇರಲಿಲ್ಲಾ
ಅ೦ದು ನನ್ನ ಜೋತೆಯಿದ್ದು ಬೆನ್ನು ತಟ್ಟಿದ್ದಾ ನಾನೆ೦ಬ ಅಹ೦
ಇ೦ದು ಮಣ್ಣು ಪಾಲಾಗಿತ್ತು
ಅಸೂಯೆಯ ಕಿಚ್ಚು ಹಿಡಿಯದೆ ಬದುಕು ಎ೦ದು ಹೇಳಿದ್ದಾ ಒಲವು
ಈಗ ದೂರದಿ೦ದ ಕೈ ಬಿಸಿತ್ತು
ನಾನು ಎನ್ನುವುದು ನನ್ನಿ೦ದಾ ತಪ್ಪು ಮಾಡಿಸಿತ್ತು


ಆ ತಪ್ಪಿನಿ೦ದಾ ಪಾಠ ಕಲಿಯಲು ನಾ ಹೊರಟೆ


ಅರಿತೋ ಅರಿಯದೆಯೋ ನಾನು ಎಲ್ಲರಿ೦ದಾ ದೂರಾಗಿರುವೆ
ಸೋತ ಬದುಕಲಿ ನಾನೆ೦ಬುದಾ ಮರೆತು ಬದುಕಲು ಕಲಿಯ ಹೊರಟಿರುವೆ
ನಾನು ಬೆರೆತರೆ ಎಲ್ಲುರೂ ನನ್ನವರೇ ಎ೦ಬ ಸತ್ಯ ಅರಿತೆರುವೆ
ಬದುಕಿಗೆ ಬೆನ್ನು ಮಾಡದೇ ಬದುಕಲು ನಿರ್ಧರಿಸಿರುವೆ
ಎಲ್ಲರಲೊ೦ದಾಗಿ ಸೋಲಲ್ಲೇ ಗೆಲುವಾ ಕ೦ಡಿರುವೆ

ಯಾವ ಬ೦ಧಕೆ ಸೋತೆ?


ಕನಸು ಕ೦ಗಳ ಚೆಲುವೇ ನೀನೇಕೆ ಹೀಗೆ ಮಾಡಿದ್ದೆ?
ನನಗೆ ತಿಳಿಯದ೦ತೆ ನೀ ದೂರ ಹೋಗಿದ್ದೆ
ಸಾವಿರ ಕನಸುಗಳಿಗೆ ಸಾಲ ನೀಡಿದ ನೀನು
     ನನ್ನ ಪ್ರೀತಿ ಸಾಲದೆ೦ಬ೦ತೇ ಎದ್ದು ಹೋಗಿದ್ದೆ


ನಕ್ಕಾಗ ನಲಿಸಿ ಅತ್ತಾಗ ಕಣ್ಣೋರೆಸಿ ನಾನಿರುವೆ ನಿನ್ನ ಜೊತೆ ಎ೦ದಿದ್ದೆ
ಏಕೆ? ಗೆಳತಿ ಜೀವನದುದ್ದಕ್ಕೂ ನನ್ನಾ ಒ೦ಟಿ ಮಾಡಿ ಹೊರಟು ಬಿಟ್ಟಿದ್ದೆ?
ಹೋಗುವಾಗಾ ಒ೦ದು ಸೂಚನೆಯೂ ನೀಡದ೦ತೇ 
                             ಸದ್ದಿಲ್ಲದೇ ಎದ್ದು ಹೋಗಿದ್ದೆ


ನನ್ನ ಜೋತೆ ಇದ್ದಾಗ ಹೇಳಿದ್ದಾ ನಿನ್ನೇಲ್ಲಾ ಮಾತುಗಳು ಸುಳ್ಳಾಗಿತ್ತೇ?
ಅದೆಲ್ಲವೂ ಸುಳ್ಳೇ? ನೀ ಬಿಕ್ಕಿ ಬಿಕ್ಕಿ ಅಳುತ್ತಾ ನಿನ್ನಾ ಬಿಟ್ಟಿರಲಾರೆ ಎ೦ದಿದ್ದು?
ಕೈಯಲ್ಲಿ ಕೈ ಇಟ್ಟು ಮನಸ್ಸು ಒಪ್ಪಿದಾ ಮೇಲೆ ಆಯಿತಲ್ಲವೇ
                              ಮದುವೆ ಎ೦ದಿದ್ದು?


ಕೊನೇಯದಾಗಿ ಒ೦ದೇ ಪ್ರಶ್ನೆ ನಿನ್ನಲ್ಲಿ, ಏನು ಕಡಿಮೆಯಿತ್ತು ನನ್ನಲ್ಲಿ?
ಭೋರ್ಗರೆವ ಪ್ರೀತಿ ಎರೆದಿದ್ದೆ, ನನ್ನುಸಿರಿಗಿ೦ತ ನಿನ್ನಾ ಜೋಪಾನ ಮಾಡಿದ್ದೆ   
ನಿಷ್ಕಲ್ಮಶ ಹ್ರದಯದ ಪ್ರತೀ ಬಡಿತದಲ್ಲೂ ನಿನ್ನೆಸರನೇ ಕೇಳುತಿದ್ದೆ
ಆದರೂ ನೀ ದೂರಾದೆ, ಬಹುದೂರಾದೆ
ನಿಜ ಹೇಳು ಹುಡುಗೀ..
ಯಾವ ಬ೦ಧಕೆ ಸೋತು ಈ ಸ೦ಬ೦ಧ ತೊರೆದಿದ್ದೆ?
     
                                                                                            

Wednesday, February 16, 2011

ಒಮ್ಮೆ ಬರಲಾರೆಯಾ ಇಲ್ಲೇ?


ಬಣ್ಣ ಬಣ್ಣದಾ ಕನಸು ಏಷ್ಟೋ ಹೆಣ್ಣಾ ಮುತ್ತಿಕ್ಕುವಾ ಸಮಯದಲಿ.....
ನಾ ಮಾತ್ರಾ ಹೊರಳುತಿರುವೆ,ನಾಳೆ ಏನಾಗುವುದೋ ಎ೦ಬ ಆಸೆಯಲಿ..
ನಿಮಿಷಕ್ಕೊಮ್ಮೆ ನೋಡಿರುವೆ ಗಡಿಯಾರಾ,ಇ೦ದು ಓಡದಾ ಸಮಯವಾ ನಿ೦ದಿಸುತಲಿ.....
ಶಪಿಸಿರುವೆ ಚ೦ದಿರನಾ ಬೇಗ ಮುಳುಗಬಾರದೇ ಎ೦ದು?......
ಸೋತಾ ಕ೦ಗಳು ಹಟ ಮಾಡುತ್ತಿದೆ ನಾ ಸೋತೆ ಎನುತ್ತಾ...
ಬಯಸುತಿದೆ ಮನಸು ಈಗೇ ಬರಬಾರದೇ ನೀನಿಲ್ಲಿ.....
ತೋರಿಸ ಬಯಸುತ್ತೇನೆ ನಾನು ಈ ರಾತ್ರಿ ಕಳೆದು ನಿನ್ನಾ ಭೇಟಿ ಮಾಡಲು ನಾ ಕಾತರಿಸುತ್ತಿರುವಾ ಈ ಪರಿ.....

Tuesday, February 8, 2011

ಹೇಳಿ ಹೋಗು..... ಹೋಗುವಾ ಮುನ್ನಾ........

ನೀ ನನ್ನ ಜೊತೆಯಿರಲು ಬೇರೆ ಆಸರೆ ಏಕೆ?.....
ಮನ ನಿನ್ನ ಬಯಸಿರಲು ಬಯಕೆಗೆ ಬರವೇಕೆ?.....
ಧ್ಯಾನಿಸುತಲಿ ನಾ ನಿನ್ನಾ ಮರೆತಿರಲು ಜಗವನ್ನಾ....
ಹೇಳಿ ಹೋಗು ಸ೦ಗಾತಿ ಬಿಟ್ಟು ಹೊರಡುವಾ ಮುನ್ನಾ...