Thursday, March 24, 2011

ಯಾವ ಬ೦ಧಕೆ ಸೋತೆ?


ಕನಸು ಕ೦ಗಳ ಚೆಲುವೇ ನೀನೇಕೆ ಹೀಗೆ ಮಾಡಿದ್ದೆ?
ನನಗೆ ತಿಳಿಯದ೦ತೆ ನೀ ದೂರ ಹೋಗಿದ್ದೆ
ಸಾವಿರ ಕನಸುಗಳಿಗೆ ಸಾಲ ನೀಡಿದ ನೀನು
     ನನ್ನ ಪ್ರೀತಿ ಸಾಲದೆ೦ಬ೦ತೇ ಎದ್ದು ಹೋಗಿದ್ದೆ


ನಕ್ಕಾಗ ನಲಿಸಿ ಅತ್ತಾಗ ಕಣ್ಣೋರೆಸಿ ನಾನಿರುವೆ ನಿನ್ನ ಜೊತೆ ಎ೦ದಿದ್ದೆ
ಏಕೆ? ಗೆಳತಿ ಜೀವನದುದ್ದಕ್ಕೂ ನನ್ನಾ ಒ೦ಟಿ ಮಾಡಿ ಹೊರಟು ಬಿಟ್ಟಿದ್ದೆ?
ಹೋಗುವಾಗಾ ಒ೦ದು ಸೂಚನೆಯೂ ನೀಡದ೦ತೇ 
                             ಸದ್ದಿಲ್ಲದೇ ಎದ್ದು ಹೋಗಿದ್ದೆ


ನನ್ನ ಜೋತೆ ಇದ್ದಾಗ ಹೇಳಿದ್ದಾ ನಿನ್ನೇಲ್ಲಾ ಮಾತುಗಳು ಸುಳ್ಳಾಗಿತ್ತೇ?
ಅದೆಲ್ಲವೂ ಸುಳ್ಳೇ? ನೀ ಬಿಕ್ಕಿ ಬಿಕ್ಕಿ ಅಳುತ್ತಾ ನಿನ್ನಾ ಬಿಟ್ಟಿರಲಾರೆ ಎ೦ದಿದ್ದು?
ಕೈಯಲ್ಲಿ ಕೈ ಇಟ್ಟು ಮನಸ್ಸು ಒಪ್ಪಿದಾ ಮೇಲೆ ಆಯಿತಲ್ಲವೇ
                              ಮದುವೆ ಎ೦ದಿದ್ದು?


ಕೊನೇಯದಾಗಿ ಒ೦ದೇ ಪ್ರಶ್ನೆ ನಿನ್ನಲ್ಲಿ, ಏನು ಕಡಿಮೆಯಿತ್ತು ನನ್ನಲ್ಲಿ?
ಭೋರ್ಗರೆವ ಪ್ರೀತಿ ಎರೆದಿದ್ದೆ, ನನ್ನುಸಿರಿಗಿ೦ತ ನಿನ್ನಾ ಜೋಪಾನ ಮಾಡಿದ್ದೆ   
ನಿಷ್ಕಲ್ಮಶ ಹ್ರದಯದ ಪ್ರತೀ ಬಡಿತದಲ್ಲೂ ನಿನ್ನೆಸರನೇ ಕೇಳುತಿದ್ದೆ
ಆದರೂ ನೀ ದೂರಾದೆ, ಬಹುದೂರಾದೆ
ನಿಜ ಹೇಳು ಹುಡುಗೀ..
ಯಾವ ಬ೦ಧಕೆ ಸೋತು ಈ ಸ೦ಬ೦ಧ ತೊರೆದಿದ್ದೆ?
     
                                                                                            

1 comment:

  1. wow lovely nitu ... ನಕ್ಕಾಗ ನಲಿಸಿ ಅತ್ತಾಗ ಕಣ್ಣೋರೆಸಿ ನಾನಿರುವೆ ನಿನ್ನ ಜೊತೆ ಎ೦ದಿದ್ದೆಏಕೆ? ಗೆಳತಿ ಜೀವನದುದ್ದಕ್ಕೂ ನನ್ನಾ ಒ೦ಟಿ ಮಾಡಿ ಹೊರಟು ಬಿಟ್ಟಿದ್ದೆ?ಹೋಗುವಾಗಾ ಒ೦ದು ಸೂಚನೆಯೂ ನೀಡದ೦ತೇ ಸದ್ದಿಲ್ಲದೇ ಎದ್ದು ಹೋಗಿದ್ದೆ really very nice...

    ReplyDelete