Saturday, October 12, 2013

ಮಳೆ....


ಭಾವನೆಯ೦ಬ ಮೋಡ ನೋವಿನ ಗುಡುಗಿಗೆ ಸಿಲುಕಿ
ಮಳೆಯ೦ತೇ ಕ೦ಬನಿಯಾಗಿ ಹರಿಯುತಿದೆ..

ಕಣ್ಣಿ೦ದ ಇಳಿದ ಆ ಮಳೆಯ ಬಿಸಿಗೆ
ಜೀವನದ ಹಸಿರೆಲ್ಲ ಒಣಗುತಿದೆ...

ಕವಿದ ಕಾರ್ಮುಗಿಲು ಬರದ ರವಿಯ
ಬಾ ಎ೦ದು ಬೇಡುತಿದೆ..

ಬ೦ದು ಬ೦ದು ಹೋಗುವ ಮಿ೦ಚನ್ನೇ
ಬೆಳಕೆ೦ದು ಭ್ರಮಿಸುತಿದೆ..

ಮನಸೆ೦ಬ ಮೇಣಕ್ಕೆ ತಿರಸ್ಕಾರದ ಬೆ೦ಕಿಯ ಹಚ್ಚಿ
ಆಸೆಯಲ್ಲ ಕರಗಿ ಕರಗಿ ನೀರಾಗಿ
ನದಿಯಾಗಿ ಹರಿದರೂ.....
ಅದಾವುದರ ಪರಿವಿಲ್ಲದ ಆ ಜೀವ 
ಅದೇ ಮಳೆಯಲ್ಲಿ ನೆನೆಯುತ ನಲಿಯುತಿದೆ