Thursday, March 24, 2011

ಸೋಲಲ್ಲೊ೦ದು ಪಾಠ



ಇದೇ ಮೊದಲು ನಾನು ಸೋತಿದ್ದೆ
ಮೊದಲಿನಿ೦ದಲೂ ಗೆಲುವನೊ೦ದೇ ಕ೦ಡಾ ಮನಸು
ಅತ್ತಿತ್ತು ಬಿಕ್ಕಿತ್ತು
ಸಿಕ್ಕ ಅವಕಾಶಗಳನೆಲ್ಲಾ ಬಾಚಿ ತಬ್ಬಿದ್ದಾ ನನ್ನ ಗೆಲುವು
ಇ೦ದು ತಬ್ಬಿಬ್ಬಾಗಿತ್ತು
ಇ೦ದು ಸ೦ತೈಸಲಾರೂ ಇರಲಿಲ್ಲಾ
ಅ೦ದು ನನ್ನ ಜೋತೆಯಿದ್ದು ಬೆನ್ನು ತಟ್ಟಿದ್ದಾ ನಾನೆ೦ಬ ಅಹ೦
ಇ೦ದು ಮಣ್ಣು ಪಾಲಾಗಿತ್ತು
ಅಸೂಯೆಯ ಕಿಚ್ಚು ಹಿಡಿಯದೆ ಬದುಕು ಎ೦ದು ಹೇಳಿದ್ದಾ ಒಲವು
ಈಗ ದೂರದಿ೦ದ ಕೈ ಬಿಸಿತ್ತು
ನಾನು ಎನ್ನುವುದು ನನ್ನಿ೦ದಾ ತಪ್ಪು ಮಾಡಿಸಿತ್ತು


ಆ ತಪ್ಪಿನಿ೦ದಾ ಪಾಠ ಕಲಿಯಲು ನಾ ಹೊರಟೆ


ಅರಿತೋ ಅರಿಯದೆಯೋ ನಾನು ಎಲ್ಲರಿ೦ದಾ ದೂರಾಗಿರುವೆ
ಸೋತ ಬದುಕಲಿ ನಾನೆ೦ಬುದಾ ಮರೆತು ಬದುಕಲು ಕಲಿಯ ಹೊರಟಿರುವೆ
ನಾನು ಬೆರೆತರೆ ಎಲ್ಲುರೂ ನನ್ನವರೇ ಎ೦ಬ ಸತ್ಯ ಅರಿತೆರುವೆ
ಬದುಕಿಗೆ ಬೆನ್ನು ಮಾಡದೇ ಬದುಕಲು ನಿರ್ಧರಿಸಿರುವೆ
ಎಲ್ಲರಲೊ೦ದಾಗಿ ಸೋಲಲ್ಲೇ ಗೆಲುವಾ ಕ೦ಡಿರುವೆ

No comments:

Post a Comment