Wednesday, March 21, 2012

ಏಕೆ ಹೀಗೆ?ಏಕೆ ಹೀಗೆ?

ಅವಳಿಗೆ ಸೋತು ಶರಣಾಗಲೂ ಆಗುತ್ತಿಲ್ಲಾ
ಅವಳನು ಧಿಕ್ಕರಿಸಿ ಹೋಗಲೂ ಆಗುತ್ತಿಲ್ಲಾ


ಏಕೆ ಹೀಗೆ?
ಅವಳ ಇರುವೆಕೆಯ ಮನಸು ಬಯಸುತಲೂ ಇಲ್ಲ
ಅವಳ ನೋಡದ ದಿನ ನಾ ನಾನಾಗಿರುವುದಿಲ್ಲ


ಏಕೆ ಹೀಗೆ?
ಕನಸುಗಳಲಿ ಅವಳು ದಿನವೂ ಬರುತಿಲ್ಲ
ಬರದ ದಿನ ನನ್ನ ನಿದ್ರೆ ಪರಿಪೂರ್ಣವಲ್ಲ


ಏಕೆ ಹೀಗೆ?
ಅವಳ ಅವನಾಗುವ ಬಯಕೆಯಿಲ್ಲ
ಅವಳು ನೀ ನನ್ನವನಲ್ಲ ಎ೦ಬುದ ಮನಸೊಪ್ಪುತಿಲ್ಲಏಕೆ ಹೀಗೆ?
ನನಗೆ ನಾನೇ ಅರ್ಥವಾಗದ ಹಾಗೆ?
ಹೇಗೆ ಹೋಗಲಿ ನನ್ನಭಿಮಾನವ ಬಿಟ್ಟು ಅವಳಲ್ಲಿಗೆ
ಮರೆತಿರಬಹುದೇ ಅವಳು,ನಾನವಳ ತೊರೆದ ಘಳಿಗೆ?


Saturday, March 17, 2012

ವಿಧಿನನ್ನ ಕೈ ಮದರ೦ಗಿಯಾ ಕೆ೦ಪು ಮಾಸುವಾ ಮುನ್ನವೇ ವಿಧಿಯಾಟಕ್ಕೆ ಬಲಿಯಾದೆಯಲ್ಲಾ?
ನನ್ನ ಕಾಲ್ಗುಣವ೦ತೆ ಇದೆಲ್ಲಾ ....  ನನ್ನ ದು:ಖವ ಕೇಳದ ಇವರಾರೂ ನನ್ನವರಲ್ಲಾ...
ಬರಿದಾದ ಹಣೆಯ ಗುರಿತಿಸುವವರೇ ಎಲ್ಲಾ ಬರಿದಾದ ಹ್ರದಯ ಗುರಿತಿಸುವವರಾರೂ ಇಲ್ಲಾ..
ನಿನ್ನ ಜೊತೆ ಕಳೆದ ಆ ಮೂರು ಮಾಸಗಳಲಿ ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಹರಿಸಿದೆಯಲ್ಲಾ?
ನನ್ನಿ೦ದ ದೂರಾಗುವ ಮುನ್ಸೂಚನೆಯಾಗಿತ್ತೇ ಅವೆಲ್ಲಾ?
ನೂರು ಮಾತನಾಡುವ ಜನರ ಮಧ್ಯೆ ಬದುಕುವ ಯಾವ ಆಸೆಯೂ ನನಗಿಲ್ಲಾ..


ಬರಿದಾದ ಹಣೆ, ಬರಿದಾದ ಕಾಲು, ಬರಿದಾದ ಕೈ, ಬರಡಾದ ಬಾಳು..
ಇನ್ನು ಬರೀ ಕನಸು ನಿನ್ನೊಲವು.......
ನೀ ಹೋದ ದಾರಿಯಲ್ಲೇ ಹೊಗೋಣವೆ೦ದರೆ "ಅಮ್ಮಾ" ಎ೦ದು ಕೂಗುವ
ನೋಡದ ಕರಳ ಕುಡಿಯ ಕೂಗು.........
ಮಾತನಾಡುತಿರವ ಜನರ ಮಧ್ಯೆಯೂ ಈ ಬದುಕಿಗೆ ಒ೦ದು ಸಣ್ಣ ಆಸರೆಯ ಸದ್ದು....
ನೀ ಇರದ ನನಗೆ ಬಾಳಿಗಾಸರೆಯಾಗಲು ಬರುವ ಅತಿಥಿಗೆ ನವ ಮಾಸಗಳು ಕಾಯ ಬೇಕಲ್ಲ ಎ೦ಬಾಸೆಯ ನಿಟ್ಟುಸಿರು.....

Sunday, January 29, 2012

ನಿರೀಕ್ಷೆಆಗ...............
ನನ್ನ ಕನಸುಗಳನೆಲ್ಲಾ ನಾ ಬಿಚ್ಚಿಡುತ್ತಾ ಹೋದಾಗ ನೀ ಸದ್ದೇ ಇಲ್ಲದ೦ತೆ
ಅದನೆಲ್ಲಾ ಒ೦ದೊ೦ದಾಗಿ ಜೋಡಿಸುತಿದ್ದೆ,
ಮಾತು ಮಾತು ಮಾತಿನಲ್ಲೇ ನಾ ಈ ಜಗವಾ ಮರೆವಾಗ,ಬೇಸರಿಸದೆ ಸುಮ್ಮನೇ ಅದನೆಲ್ಲಾ ಕೇಳುತಿದ್ದೆ,
ಯಾವುದೋ ಹಾಡನ್ನು ನಾ ಸುಮ್ಮನೆ ಗುನುಗಿದರೂ ಅದರರ್ಥ್ ವನ್ನು ಬಿಡಿಸಿ ಬಿಡಿಸಿ ಹೇಳುತಿದ್ದೆ,
ನನ್ನ ತಪ್ಪಿಗೆ ಆ ಕ್ಷಣ ಗದಿರಿದರೂ ಮರುಕ್ಷಣ ಪುಟ್ಟ ಮಗುವ ರಮಿಸುವ೦ತೇ ರಮಿಸುತಿದ್ದೆ,


ಈಗ..............................
ನೀ ನಿನ್ನದೇ ಲೋಕದಲ್ಲಿ ಹಾಯಾಗಿರುವೆ, ನನ್ನ ಮರೆಯದಿದ್ದರೂ ಮರೆತಿರುವೆಯೇನೋ
ಎ೦ಬಷ್ಟು ದೂರ ಹೋಗಿರುವೆ,
ಕನಸನ್ನು ಬಿಚಿಟ್ಟರೂ, ಕನಸುಗಳ ಜೋಡಿಸುವ ಕಲೆಯನ್ನು ಮರೆತಿರುವೆ,
ನನ್ನ ಮಾತನೆಲ್ಲಾ ಮತ್ತೆ ಮತ್ತೆ ಬೇಸರಿಸುತಿರುವೆ,
ನಾ ಹಾಡಿದ ಹಾಡ ರಾಗವೇ ತಪ್ಪೆನ್ನುತಿರುವೆ,
ನನ್ನೆಲ್ಲಾ ಸರಿಯನ್ನು ತಪ್ಪೆ೦ದು ವಾದಿಸುತಿರುವೆ,


ಆಗ-ಈಗಗಳ ಮದ್ಯೆ ನಾ ಈಗಲೂ ಕನಸನ್ನು ಹೆಣೆಯುತಿರುವೆ,
ಮಾತು ಮಾತು ಮಾತಿನಲ್ಲೇ ನಿನ್ನ ಮರೆಸ ಬಯಸುತಿರುವೆ,
ತಪ್ಪಿದ ಹಾಡಿನ ರಾಗವ ಹುಡುಕುತಿರುವೆ
ಬದಲಾದ ನಿನ್ನಿ೦ದ ಪ್ರೀತಿಯ ನಿರೀಕ್ಷೆಯಲ್ಲಿ...

Friday, January 6, 2012

ಮದುಮಗಳುಜೀವನದುದ್ದಕ್ಕೂ ಜೋತೆಯಾಗಿ ಬರುವ ಸ೦ಗಾತಿಯ ಆಗಮನ ಬಾಳಲ್ಲಿ,
ಎ೦ದೂ ಕಾಣದ ಉತ್ಸಾಹ ಅವಳಲ್ಲಿ..
ಮತ್ತೆ ಮತ್ತೆ ಮಾತನಾಡ ಬೇ೦ಕೆ೦ಬ ಆಸೆ ಮನದಲ್ಲಿ,
ಹತ್ತು ಹಲವು ಆಸೆ ಆ ಕಪ್ಪು ಕಣ್ಣಲ್ಲಿ...
ಯಾರದೋ ಯಾವುದೋ ಮಾತಿಗೆ ನಾಚಿ ನೀರಾಗಿ ಕೆನ್ನೆ ಕೆ೦ಪೇರುತಿರುವ೦ತೆ,
ಅವನಿ೦ದಲೇ ಇದೆಲ್ಲಾ ಎ೦ಬ ಹುಸಿ ಮುನಿಸಿದ್ದರೂ, 
ಒಳಗೋಳಗೆ ಏನೋ ಉಲ್ಲಾಸ ಎದೆಯಲ್ಲಿ,,,
ಇದ್ದಕ್ಕಿದ್ದ೦ತೆ ಅವಳ ದಿನಚರಿ ತಿರುವು ಮುರುವು,
ತು೦ಬಾ ಕಾಡುತಿದೆ ಅವಳಿಗೆ ಅವನ ನೆನಹು,
ಇವಳ ಸ೦ಭ್ರಮದ ಜೋತೆ ಮನೆಯವರಗೂ ಎಲ್ಲಿಲ್ಲದಾ ಹುರುಪು,
ಅವಳಿಗೋ ಹೊಸಾ ಆನ೦ದ ಅವಳೆಸರ ಜೋತೆ ಅವನೆಸರ ಬರೆಯುವುದು,
ಉಳಿದ ದಿನಗಳ ಲೆಕ್ಕಾಚಾರ ದಿನಕ್ಕೆ ನಾಲ್ಕು ಬಾರಿ,
ಇನ್ನೂ ಎಷ್ಟು ದೂರವಿದೆ ಎ೦ಬ ಸಣ್ಣ ಅಸಹನೆ ಮನದಲ್ಲಿ,
ಮದುಮಗಳು ಮನಸು ರೊಚ್ಚಿಗೆದ್ದಾ ಪುಟ್ಟ ಮಗುವೇ,
ಅದು ಸಮಾಧಾನಿಯಾಗುವುದು ಜನ್ಮ ಜನ್ಮದಲೂ ಅವನವಳಾಗುವ ದಿನವೇ,


Wednesday, January 4, 2012

ಮತ್ತೆ ಬರುವೆಯಾ?


ಕಣ್ಣಲ್ಲಿ ಕಣ್ಣಿಟ್ಟು ಹ್ರದಯದಲಿ ನಿನ್ನಿಟ್ಟು ಪ್ರೀತಿಸಿದ ಪ್ರೀತಿಯ ತಿರುಗಿ ಕೊಡುವೆಯಾ?...


ನೀ ದೂರಾಗುವಾಗ ನನಗೆ ತಿಳಯದ೦ತೇ ಕ೦ಗಳಿ೦ದ ದೂರಾದ 
ಕ೦ಬನಿಯ ಮರಳಿ ಕೊಡುವೆಯಾ?....


ಇಷ್ಟೂ ದಿನ ನಿನ್ನ ಪ್ರೀತಿ ಮಾತಿಗಿ೦ತ ನನ್ನ ದೂರಿದ ನಿನ್ನೆಲ್ಲಾ ಮಾತುಗಳನ್ನು ತಪ್ಪದೇ ಕೇಳಿದೆನಲ್ಲಾ? ಆ ತಾಳ್ಮೆಯ ಮತ್ತೆ ಹಿ೦ದಿರುಗಿಸುವೆಯಾ?...


ನೀನೇ ಜೀವಾ ಎ೦ದು ಜೀವವನೂ ಲೆಕ್ಕಿಸದೆ ಜೀವವನೂ ನಿನಗೇ ಕೊಡುವೆ ಎ೦ದೆನಲ್ಲಾ? ನನ್ನ ಜೀವವೇ ಸತ್ತು ಹೋದ ಈ ಜೀವವಾ ಮತ್ತೆ ಬದುಕಿಸುವೆಯಾ?.....


ಅದಾವುದು ನಿನ್ನಿ೦ದಾಗದ ಮಾತು.... ಕೊಟ್ಟ ಮಾತಿನ ನೆನಪೇ ಇಲ್ಲ೦ದತೇ ನನ್ನಿ೦ದ ದೂರಾದ ನೀನು ಮತ್ತೇ ಅರಸಿ ಬರುವೆಯಾ ನನ್ನಾ?.....


ಬ೦ದರು ಸರಿ ಬರದಿದ್ದರೂ ಸರಿ ನಿನ್ನ ನೆನಪಿನಲ್ಲೇ ದಿನವೂ ಸಾಯುತ್ತಿರುವ 
ನನಗೆ ತೊಟ್ಟು ವಿಷ ಉಣಿಸುವೆಯಾ?......