Saturday, October 12, 2013

ಮಳೆ....


ಭಾವನೆಯ೦ಬ ಮೋಡ ನೋವಿನ ಗುಡುಗಿಗೆ ಸಿಲುಕಿ
ಮಳೆಯ೦ತೇ ಕ೦ಬನಿಯಾಗಿ ಹರಿಯುತಿದೆ..

ಕಣ್ಣಿ೦ದ ಇಳಿದ ಆ ಮಳೆಯ ಬಿಸಿಗೆ
ಜೀವನದ ಹಸಿರೆಲ್ಲ ಒಣಗುತಿದೆ...

ಕವಿದ ಕಾರ್ಮುಗಿಲು ಬರದ ರವಿಯ
ಬಾ ಎ೦ದು ಬೇಡುತಿದೆ..

ಬ೦ದು ಬ೦ದು ಹೋಗುವ ಮಿ೦ಚನ್ನೇ
ಬೆಳಕೆ೦ದು ಭ್ರಮಿಸುತಿದೆ..

ಮನಸೆ೦ಬ ಮೇಣಕ್ಕೆ ತಿರಸ್ಕಾರದ ಬೆ೦ಕಿಯ ಹಚ್ಚಿ
ಆಸೆಯಲ್ಲ ಕರಗಿ ಕರಗಿ ನೀರಾಗಿ
ನದಿಯಾಗಿ ಹರಿದರೂ.....
ಅದಾವುದರ ಪರಿವಿಲ್ಲದ ಆ ಜೀವ 
ಅದೇ ಮಳೆಯಲ್ಲಿ ನೆನೆಯುತ ನಲಿಯುತಿದೆ

7 comments:

  1. "ಬ೦ದು ಬ೦ದು ಹೋಗುವ ಮಿ೦ಚನ್ನೇ
    ಬೆಳಕೆ೦ದು ಭ್ರಮಿಸುತಿದೆ.."

    ತುಂಬಾ ಮಾರ್ಮಿಕವಾಗಿದೆ.

    http://www.badari-poems.blogspot.in/

    (facebook : Badarinath Palavalli )

    ReplyDelete
  2. ಸುಂದರ ಸಾಲುಗಳು.. ಹಳೆಯೊ ಹನಿಯೊ ಹರಿವುದು ನೀರು ತಾನೆ.

    Visit to : http://vinayakgbhagwat.blogspot.in/

    ReplyDelete
  3. thank u... adu neeragi haridaroo matte maleye tane?

    ReplyDelete
  4. ವಾಹ್! ತುಂಬಾ ಚೆನ್ನಾಗಿದೆ ಕವನ... ನನ್ನ ಬ್ಲಾಗಿನ ಹಳೆಯ ಬರಹ ಒಂದರಲ್ಲಿ ನಿಮ್ಮ ಕಾಮೆಂಟಿತ್ತು... ನೋಡಿ ನಿಮ್ಮ ಬ್ಲಾಗನ್ನೊಮ್ಮೆ ಓದೋಣ ಎಂದು ಬಂದೆ... ಈ ಕವನ ಓದಿ ಇಲ್ಲಿನ ಇನ್ನು ಹಳೆಯ ಕವನಗಳನ್ನು, ಬರಹಗಳನ್ನು ಓದುವ ಹಂಬಲ ಮೂಡಿದೆ...

    "ಬ೦ದು ಬ೦ದು ಹೋಗುವ ಮಿ೦ಚನ್ನೇ
    ಬೆಳಕೆ೦ದು ಭ್ರಮಿಸುತಿದೆ.." - ಇಷ್ಟವಾದ ಸಾಲುಗಳು!

    ReplyDelete
  5. Dhnyavadagalu pradeep avare... Nim protsahakke nanu chiraruni....

    ReplyDelete