Wednesday, March 21, 2012

ಏಕೆ ಹೀಗೆ?



ಏಕೆ ಹೀಗೆ?

ಅವಳಿಗೆ ಸೋತು ಶರಣಾಗಲೂ ಆಗುತ್ತಿಲ್ಲಾ
ಅವಳನು ಧಿಕ್ಕರಿಸಿ ಹೋಗಲೂ ಆಗುತ್ತಿಲ್ಲಾ


ಏಕೆ ಹೀಗೆ?
ಅವಳ ಇರುವೆಕೆಯ ಮನಸು ಬಯಸುತಲೂ ಇಲ್ಲ
ಅವಳ ನೋಡದ ದಿನ ನಾ ನಾನಾಗಿರುವುದಿಲ್ಲ


ಏಕೆ ಹೀಗೆ?
ಕನಸುಗಳಲಿ ಅವಳು ದಿನವೂ ಬರುತಿಲ್ಲ
ಬರದ ದಿನ ನನ್ನ ನಿದ್ರೆ ಪರಿಪೂರ್ಣವಲ್ಲ


ಏಕೆ ಹೀಗೆ?
ಅವಳ ಅವನಾಗುವ ಬಯಕೆಯಿಲ್ಲ
ಅವಳು ನೀ ನನ್ನವನಲ್ಲ ಎ೦ಬುದ ಮನಸೊಪ್ಪುತಿಲ್ಲ



ಏಕೆ ಹೀಗೆ?
ನನಗೆ ನಾನೇ ಅರ್ಥವಾಗದ ಹಾಗೆ?
ಹೇಗೆ ಹೋಗಲಿ ನನ್ನಭಿಮಾನವ ಬಿಟ್ಟು ಅವಳಲ್ಲಿಗೆ
ಮರೆತಿರಬಹುದೇ ಅವಳು,ನಾನವಳ ತೊರೆದ ಘಳಿಗೆ?


4 comments:

  1. ಬದುಕೆಂಬ ನಿರಂತರ ಪಯಣದಲ್ಲಿ ಪ್ರತಿದಿನ ಹೊಸದಾರಿ .. ಕಂಡ ಜನಗಳದೇ ಹೊಸ ಹೊಸ ಭಾವ.. ಹಾಗಾಗಿ ಎಲ್ಲವನ್ನೂ ಅರ್ಥೈಸುವುದು ಸಾಧ್ಯವೇ ? ತಿಳಿದ ವಿಷಯಗಳಿಗಿಂತ ತಿಲಿಯದವೇ ಹೆಚ್ಚಲ್ಲವೇ ಗೆಳೆಯ ? ..
    ಒಳ್ಳೆಯ ಕವನಕ್ಕಾಗಿ ಅಭಿನಂದನೆಗಳು :-)

    ReplyDelete
  2. chennaagide..innu bareyiri...bereyavara blog ge hogi....odi.... matte matte bareyiri.... munduvarisi..

    ReplyDelete