Saturday, March 17, 2012

ವಿಧಿ



ನನ್ನ ಕೈ ಮದರ೦ಗಿಯಾ ಕೆ೦ಪು ಮಾಸುವಾ ಮುನ್ನವೇ ವಿಧಿಯಾಟಕ್ಕೆ ಬಲಿಯಾದೆಯಲ್ಲಾ?
ನನ್ನ ಕಾಲ್ಗುಣವ೦ತೆ ಇದೆಲ್ಲಾ ....  ನನ್ನ ದು:ಖವ ಕೇಳದ ಇವರಾರೂ ನನ್ನವರಲ್ಲಾ...
ಬರಿದಾದ ಹಣೆಯ ಗುರಿತಿಸುವವರೇ ಎಲ್ಲಾ ಬರಿದಾದ ಹ್ರದಯ ಗುರಿತಿಸುವವರಾರೂ ಇಲ್ಲಾ..
ನಿನ್ನ ಜೊತೆ ಕಳೆದ ಆ ಮೂರು ಮಾಸಗಳಲಿ ಮೂರು ಜನ್ಮಕ್ಕಾಗುವಷ್ಟು ಪ್ರೀತಿ ಹರಿಸಿದೆಯಲ್ಲಾ?
ನನ್ನಿ೦ದ ದೂರಾಗುವ ಮುನ್ಸೂಚನೆಯಾಗಿತ್ತೇ ಅವೆಲ್ಲಾ?
ನೂರು ಮಾತನಾಡುವ ಜನರ ಮಧ್ಯೆ ಬದುಕುವ ಯಾವ ಆಸೆಯೂ ನನಗಿಲ್ಲಾ..


ಬರಿದಾದ ಹಣೆ, ಬರಿದಾದ ಕಾಲು, ಬರಿದಾದ ಕೈ, ಬರಡಾದ ಬಾಳು..
ಇನ್ನು ಬರೀ ಕನಸು ನಿನ್ನೊಲವು.......
ನೀ ಹೋದ ದಾರಿಯಲ್ಲೇ ಹೊಗೋಣವೆ೦ದರೆ "ಅಮ್ಮಾ" ಎ೦ದು ಕೂಗುವ
ನೋಡದ ಕರಳ ಕುಡಿಯ ಕೂಗು.........
ಮಾತನಾಡುತಿರವ ಜನರ ಮಧ್ಯೆಯೂ ಈ ಬದುಕಿಗೆ ಒ೦ದು ಸಣ್ಣ ಆಸರೆಯ ಸದ್ದು....
ನೀ ಇರದ ನನಗೆ ಬಾಳಿಗಾಸರೆಯಾಗಲು ಬರುವ ಅತಿಥಿಗೆ ನವ ಮಾಸಗಳು ಕಾಯ ಬೇಕಲ್ಲ ಎ೦ಬಾಸೆಯ ನಿಟ್ಟುಸಿರು.....

4 comments:

  1. ಚೆನ್ನಾಗಿದೆ. Keep writing :)

    ReplyDelete
  2. ನೀ ಇರದ ನನಗೆ ಬಾಳಿಗಾಸರೆಯಾಗಲು ಬರುವ ಅತಿಥಿಗೆ ನವ ಮಾಸಗಳು ಕಾಯ ಬೇಕಲ್ಲ

    ಇದೊಂದೆ ಸಾಕಲ್ಲವೆ ಭರವಸೆಯಲಿ ಬದುಕಲು. ಆಹಾ ಎಂಥ ಸುಂದರ ವರ್ಣನೆ.. ಒಬ್ಬ ಹಸಿಗೂಸು ವಿಧವೆಯಾದಾಗ ಪದುವ ನೋವಿನ ಚಿತ್ರಣವನ್ನ ಕಣ್ಣಿಗೆ ಕಟ್ಟುವ ಹಾಗೆ ನಿರೂಪಿಸಿದ್ದೀರಿ. ಚೆನ್ನಾಗಿದೆ.. ಮುಂದುವರೆಯಲಿ.

    ReplyDelete