ದೊಡ್ದ ದೊಡ್ಡ ಅಲೆಗಳ ಅಬ್ಬರ
ಭೀಕರತೆಯ ದರ್ಬಾರ
ಸಾವು, ನೋವುಗಳ ಸರದಾರ
ಏ ಸುನಾಮಿಯೇ
ನಿನಗೆ ಧಿಕ್ಕಾರವಿರಲಿ...
ಯಾವ ಘನಕಾರ್ಯಕೆ ನೀ ಬ೦ದೆ?
ಏನು ಸುಖ ನೀ ತ೦ದೆ?
ಹೋಗುವಾಗ ಹೆಣದ ರಾಶಿಯನ್ನೇ ಹೊತ್ತೊಯ್ದ
ಮತ್ತೊ೦ದು ಯಮನ ಅವತಾರವೇ
ನಿನಗೆ ಧಿಕ್ಕಾರವಿರಲಿ...
ಎಷ್ಟು ದಿನಗಳಿ೦ದಾ ನೀ ಹೊ೦ಚುಹಾಕಿದ್ದೆ?
ಜಗ ನೋಡುವಾ ಮುನ್ನವೇ
ಏಷ್ಟೋ ಕ೦ದ೦ಮ್ಮಗಳ ಚಿರನಿದ್ರೆಗೆ ದೂಡಿದ್ದೆ
ಯಾತನೆಯ ಕೂಗನ್ನು ಮುಗಿಲು ಮುಟ್ಟುವ೦ತೇ ಮಾಡಿದ
ಆ ಜನ್ಮ ಶತ್ರುವೇ
ನಿನಗೆ ಧಿಕ್ಕಾರವಿರಲಿ...
ಮತ್ತೆ ಭೂಮಿಯ ಕ೦ಪಿಸಿ ಕ೦ಪಿಸಿ
ಬರುತ್ತೇನೆ೦ಬ ಸೂಚನೆಯ ನೀಡುತಿರುವೆ
ಈಗಾಗಲೇ ಏಷ್ಟೋ ಮನೆಗಳಲಿ
ಸೂತಕದ ಛಾಯೆಯ ಮಾಡಿರುವೆ
ಸಾವಿರ ಶವಗಳನು ಸಾಲಾಗಿ ಮಲಗಿಸಿದ
ಕಿತ್ತು ತಿನ್ನುವ ರಣಹದ್ದೇ
ನಿನಗೆ ಧಿಕ್ಕಾರವಿರಲಿ...
ಈಡೀ ಜಗವೇ ಪ್ರಳಯ ಭೀತಿಯಲ್ಲಿರುವಾಗ
ಬೆಕ್ಕಿನೆಜ್ಜೆಯನಿಟ್ಟು ಮತ್ತೆ ಬರಬೇಡ
ವೇದನೆಯ ಸಾಗರವ ಮತ್ತೆ ಹೊತ್ತು ತರಬೇಡ
ಭೀತಿ ಹವೆಯ ತರಿಸಬೇಡ
ತಪ್ಪೇ ಮಾಡದೇ ಶಿಕ್ಷೆನೀಡಿದ
ಕರುಣ ಹೀನ ಮನಸೇ
ನಿನಗೆ ಧಿಕ್ಕಾರವಿರಲಿ...
ಭೀಕರತೆಯ ದರ್ಬಾರ
ಸಾವು, ನೋವುಗಳ ಸರದಾರ
ಏ ಸುನಾಮಿಯೇ
ನಿನಗೆ ಧಿಕ್ಕಾರವಿರಲಿ...
ಯಾವ ಘನಕಾರ್ಯಕೆ ನೀ ಬ೦ದೆ?
ಏನು ಸುಖ ನೀ ತ೦ದೆ?
ಹೋಗುವಾಗ ಹೆಣದ ರಾಶಿಯನ್ನೇ ಹೊತ್ತೊಯ್ದ
ಮತ್ತೊ೦ದು ಯಮನ ಅವತಾರವೇ
ನಿನಗೆ ಧಿಕ್ಕಾರವಿರಲಿ...

ಜಗ ನೋಡುವಾ ಮುನ್ನವೇ
ಏಷ್ಟೋ ಕ೦ದ೦ಮ್ಮಗಳ ಚಿರನಿದ್ರೆಗೆ ದೂಡಿದ್ದೆ
ಯಾತನೆಯ ಕೂಗನ್ನು ಮುಗಿಲು ಮುಟ್ಟುವ೦ತೇ ಮಾಡಿದ
ಆ ಜನ್ಮ ಶತ್ರುವೇ
ನಿನಗೆ ಧಿಕ್ಕಾರವಿರಲಿ...
ಮತ್ತೆ ಭೂಮಿಯ ಕ೦ಪಿಸಿ ಕ೦ಪಿಸಿ
ಬರುತ್ತೇನೆ೦ಬ ಸೂಚನೆಯ ನೀಡುತಿರುವೆ

ಸೂತಕದ ಛಾಯೆಯ ಮಾಡಿರುವೆ
ಸಾವಿರ ಶವಗಳನು ಸಾಲಾಗಿ ಮಲಗಿಸಿದ
ಕಿತ್ತು ತಿನ್ನುವ ರಣಹದ್ದೇ
ನಿನಗೆ ಧಿಕ್ಕಾರವಿರಲಿ...
ಈಡೀ ಜಗವೇ ಪ್ರಳಯ ಭೀತಿಯಲ್ಲಿರುವಾಗ
ಬೆಕ್ಕಿನೆಜ್ಜೆಯನಿಟ್ಟು ಮತ್ತೆ ಬರಬೇಡ
ವೇದನೆಯ ಸಾಗರವ ಮತ್ತೆ ಹೊತ್ತು ತರಬೇಡ
ಭೀತಿ ಹವೆಯ ತರಿಸಬೇಡ
ತಪ್ಪೇ ಮಾಡದೇ ಶಿಕ್ಷೆನೀಡಿದ
ಕರುಣ ಹೀನ ಮನಸೇ
ನಿನಗೆ ಧಿಕ್ಕಾರವಿರಲಿ...